This version of the page http://vijaykarnataka.indiatimes.com/articleshow/33548985.cms (0.0.0.0) stored by archive.org.ua. It represents a snapshot of the page as of 2014-10-22. The original page over time could change.
ಯಶೋದಾಬೆನ್‌ ಪತ್ನಿ ಎಂದು ಒಪ್ಪಿಕೊಂಡ ಮೋದಿ - Indiatimes Vijaykarnatka
ADVERTISEMENT
  • ಮುಖಪುಟ
  • ದೇಶ-ವಿದೇಶ
  • ಕರ್ನಾಟಕ
  • ನಿಮ್ಮ ಜಿಲ್ಲೆ
  • ಕ್ರೀಡೆ-ಕ್ರಿಕೆಟ್
  • ಧರ್ಮ-ಜ್ಯೋತಿಷ್ಯ
  • ಸಿನಿಮಾ
  • ವಾಣಿಜ್ಯ
  • ವಿಚಾರ ಮಂಟಪ
  • ವಿಕ ಬ್ಲಾಗ್ಸ್
  • ಫೋಟೋ ಗ್ಯಾಲರಿ
  • ಚುನಾವಣೆ 2014
  • ರಾಜ್ಯ ರಾಜಕೀಯ
  • ಕರ್ನಾಟಕ
  • ಕ್ಲೀನ್ ಪಾಲಿಟಿಕ್ಸ್
  • ವಿಕೆ ಡಿಬೇಟ್ಸ್
  • ಚುನಾವಣೆ 2014
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » à²•à²°à³à²¨à²¾à²Ÿà²• » à²•à³à²²à³€à²¨à³ ಪಾಲಿಟಿಕ್ಸ್

ಯಶೋದಾಬೆನ್‌ ಪತ್ನಿ ಎಂದು ಒಪ್ಪಿಕೊಂಡ ಮೋದಿ

ಲೇಖನ
ಅನಿಸಿಕೆಗಳು
Post a comment
Email this article
Print this article
Save this article
My Saved articles
Reduce font size
Increase font size
Share on Messenger
Share on facebook
Share on Digg
Share on Reditt
Google BookmarksNewsvine
Live BookmarksTechnorati
Yahoo BookmarksBlogmarks
Del.icio.usApnaCircle
Tweet



ವಡೋದರಾ: ಹದಿನೇಳನೆ ವಯಸ್ಸಲ್ಲಿ ಆಗಿದ್ದ ಮದುವೆಯನ್ನು ಕೊನೆಗೂ ಒಪ್ಪಿಕೊಂಡಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ವಡೋದರಾದಿಂದ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ ನಾಮಪತ್ರದಲ್ಲಿ ಮೊದಲ ಬಾರಿಗೆ ಹೆಂಡತಿಯ ಹೆಸರನ್ನು ದಾಖಲಿಸಿದ್ದಾರೆ.

ಜನಸಾಗರದ ಮಧ್ಯೆ ವಡೋದರ ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಬುಧವಾರ ಸಲ್ಲಿಸಿದಾಗ ಅರ್ಜಿಯಲ್ಲಿರುವ ಪತ್ನಿ ಸ್ಥಾನದಲ್ಲಿ ಯಶೋದಾಬೆನ್‌ ಹೆಸರು ತುಂಬಿಸಿದ್ದರು. ಆಕೆ ಬ್ರಹ್ಮಾನ್ವಾಡದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಈಗಾಗಲೇ ನಿವೃತ್ತರಾಗಿದ್ದಾರೆ. ಅವರ ಊರು ಮೋದಿಯ ತವರು ವಡ್ನಗರದಿಂದ 35 ಕಿಮೀ ದೂರದಲ್ಲಿದೆ.

ಗುಜರಾತ್‌ನಲ್ಲಿ ಕಳೆದ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ(2001, 2002, 2007, 2012) ಸ್ಪರ್ಧಿಸುವಾಗಲೂ ಅವರು ನಾಮಪತ್ರದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರಾಗಿದ್ದ ಮೋದಿ, ಪತ್ನಿ ಹೆಸರಿನ ಮುಂದೆ ಏನನ್ನೂ ಭರ್ತಿ ಮಾಡುತ್ತಿರಲಿಲ್ಲ. 2001ರಲ್ಲೇ ಈ ವಿಚಾರದಲ್ಲಿ ಕಾಂಗ್ರೆಸ್‌ ಬಹಿರಂಗ ಸವಾಲು ಹಾಕಿ ಪಾಂಪ್ರೆಟ್‌ಗಳನ್ನೂ ಹಂಚಿ ಮೋದಿ ಅವರನ್ನು ಕೆಣಕಿತ್ತು. ಆದರೂ ಮೋದಿ ಪ್ರತಿಕ್ರಿಯಿಸಿರಲಿಲ್ಲ. ಆದರೆ ಈ ಬಾರಿ ಮೋದಿ ಸತ್ಯ ಒಪ್ಪಿಕೊಂಡಿರುವುದು ಕಾಂಗ್ರೆಸ್‌ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ಪ್ರಕಟಣೆಯಿಂದ ಮೋದಿ ಅವರಿಗೆ ಹಿನ್ನಡೆಯಾಗಲಿದ್ದು, ಮಹಿಳೆಯರು ಯಶೋದಾಬೆನ್‌ ಪರ ಕನಿಕರ ತೋರಲಿದ್ದಾರೆ, ಇದರಿಂದ ಮೋದಿ ಹಾಗೂ ಬಿಜೆಪಿ ಜನಪ್ರಿಯತೆಗೆ ಹಿನ್ನಡೆಯಾಗಲಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ಲೆಕ್ಕಾಚಾರ ಶುರುವಾಗಿದೆ.

ಮದುವೆ ಎಂದೂ ನೆರವೇರಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದರೂ, ಪತ್ನಿಯನ್ನು ಒಪ್ಪಿಕೊಳ್ಳುವುದರಿಂದ ಶುದ್ಧಚಾರಿತ್ರ್ಯ ಹೊಂದಲು ಸಾಧ್ಯವಾಗಲಿದೆ ಎಂದು ಕಾನೂನು ಸಲಹೆಗಾರರು ನೀಡಿದ ಸಲಹೆ ಪ್ರಕಾರ ಮೋದಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದಾಯ ಗೊತ್ತಿಲ್ಲ:

ಸಾರ್ವಜನಿಕ ಪ್ರತಿನಿಧಿ ಕಾಯಿದೆ 1951ರ ಪ್ರಕಾರ ಪತ್ನಿಯ ಆಸ್ತಿ ವಿವರವನ್ನು ಪತಿ ತಮ್ಮ ನಾಮಪತ್ರದಲ್ಲಿ ನಮೂದಿಸಬೇಕು. ಆದರೆ ಮೋದಿ ಅವರು ಸಲ್ಲಿಸಿದ ಅರ್ಜಿಯಲ್ಲಿ ಯಶೋದಾಬೆನ್‌ರ ಆದಾಯ ಮತ್ತಿತರ ವಿವರಗಳ ಮಾಹಿತಿಯಿಲ್ಲ ಎಂದು ಬರೆದಿದ್ದಾರೆ.

ಮೋದಿ ಅವರು ಮಣಿನಗರದಿಂದ ಉಮೇದುವಾರಿಕೆಗೆ ಸಲ್ಲಿಸಿದ ತಮ್ಮ ನಾಮಪತ್ರದಲ್ಲಿ ಪತ್ನಿ ಹೆಸರು ದಾಖಲಿಸಿಲ್ಲ ಎಂದು 2012ರಲ್ಲಿ ಮೋದಿ ವಿರುದ್ಧ ಕೋರ್ಟ್‌ಗೂ ಹೋಗಲಾಗಿತ್ತು. ಆದರೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿತ್ತು.

ನರೇಂದ್ರ ಮೋದಿ ಅವರ ವೈವಾಹಿಕ ವಿಚಾರಕ್ಕೆ ಸಂಬಂಧಪಟ್ಟಂತೆ ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್‌ನ ನಾನಾ ನಾಯಕರು ಈ ಲೋಕಸಭಾ ಚುನಾವಣೆಯಲ್ಲೂ ಮೋದಿ ವಿರುದ್ಧ ಹರಿಹಾಯ್ದಿದ್ದರು. ಮದುವೆ ವಿಚಾರದಲ್ಲಿ ತಮ್ಮ ಶುದ್ಧ ಚಾರಿತ್ರ್ಯ ಸಾಬೀತುಪಡಿಸುವಂತೆ ಕಾಂಗ್ರೆಸ್ ಆಗಾಗಾ ಒತ್ತಾಯಿಸುತ್ತಲೇ ಬಂದಿದೆ. ಅರವಿಂದ ಕೇಜ್ರಿವಾಲ್‌ ಕೂಡ ಮದುವೆ ವಿಚಾರದಲ್ಲಿ ಮೋದಿಗೆ ಟಾಂಗ್‌ ಕೊಟ್ಟಿದ್ದರು.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
  • ಮತದಾನ ಚುರುಕು: ಮತ ಚಲಾಯಿಸಿದ ಗಣ್ಯರು
  • ಕ್ಲೀನ್ ಪಾಲಿಟಿಕ್ಸ್: ಚುನಾವಣೆ ವೆಚ್ಚವನ್ನು ಸರಕಾರವೇ ವಹಿಸಲಿ...
  • ಕ್ಲೀನ್‌ ಪಾಲಿಟಿಕ್ಸ್‌: ಸವಲತ್ತು ಬೇಡ ಎಂದು ಬರೆದುಕೊಡುವೆ...
  • ಕ್ಲೀನ್ ಪಾಲಿಟಿಕ್ಸ್: ಸಂಬಳವನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಇಡುವುದಿಲ್ಲ
  • ಕ್ಲೀನ್ ಪಾಲಿಟಿಕ್ಸ್: ನಮಗೆ ಮಾತ್ರ ಇಂಥ ಪ್ರಶ್ನೆ ಯಾಕೆ?
  • ಕ್ಲೀನ್ ಪಾಲಿಟಿಕ್ಸ್‌: ನಮಗೂ ಖರ್ಚು ಇರುತ್ತದೆ ಗೊತ್ತುಂಟಾ?
  • ಕ್ಲೀನ್ ಪಾಲಿಟಿಕ್ಸ್: ಜನರಿಗೆ ನಮ್ಮ ಬಗ್ಗೆ ಸಕರಾತ್ಮಕ ಧೋರಣೆ ಇರಲಿ, ಸಂಶಯ ಬೇಡ
  • ಕ್ಲೀನ್ ಪಾಲಿಟಿಕ್ಸ್‌: ಸಂಬಳ ಕಡಿತ ಮಾಡಿ ಎನ್ನುವ ಮಾತೇ ಇಲ್ಲ
  • ಕ್ಲೀನ್‌ ಪಾಲಿಟಿಕ್ಸ್: ದುಬಾರಿ ದುನಿಯಾದಲ್ಲಿ ಈ ಸೌಲಭ್ಯ ಹೆಚ್ಚು ಅಲ್ಲ
 
ಇದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ.
ಇದನ್ನು ಟ್ವೀಟ್ ಮಾಡಿ
Tweet
Post a comment
Email this article
Print this article
Save this article
My saved articles
Reduce font size
Increase font size
ಹಿಂದಿನ ಲೇಖನ
ಮತದಾನ ಚುರುಕು: ಮತ ಚಲಾಯಿಸಿದ ಗಣ್ಯರು
ಆರೋಗ್ಯ-ಸೌಂದರ್ಯ
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಲಿವಿಂಗ್ ವಿಥ್ ಸ್ಕಿಜೋಫ್ರೇನಿಯಾ
  • ಬಂಜೆತನಕ್ಕೆ ಯಶಸ್ವಿ ಚಿಕಿತ್ಸೆ
  • ಮೂರ್ಛೆರೋಗಕ್ಕಿದೆ ಸೂಕ್ತ ಔಷಧ
  • ಕೂದಲ ಕಸಿ ನಿರ್ವಹಣೆ ಸರಳ
ಮತ್ತಷ್ಟು>>

ಪ್ರಾಪರ್ಟಿ

  • ದೀಪಾವಳಿಗೆ 'ಆಫರ್‌ಗಳ ಮಹಾಪೂರ'
  • ಹಬ್ಬದ ಖರೀದಿಗೆ ಪ್ಲಾನ್
  • ಕಚೇರಿಗೆ ಹೆಚ್ಚಿದ ಬೇಡಿಕೆ
  • 30 ಲಕ್ಷಕ್ಕೆ 2 ಬಿಎಚ್‌ಕೆ ಮನೆ
  • ಅನಿವಾಸಿಯರಿಗೆ ಸರಳ ನೀತಿ
ಮತ್ತಷ್ಟು>>

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768