VijayKarnatakahttp://vijaykarnataka.indiatimes.com/articlelist/.cmsVijaya Karnataka (Kannada News Paper) brings the Latest Kannada News Paper news & Top Breaking News on India & Karnataka Politics (Vijay Karnataka, ವಿಜಯ ಕರ್ನಾಟಕ) and more on India & around the World, Cricket, Sports, Business and Entertainment, Health & Fitness news and opinions from the leading columnists of Vijaya Karnataka Newspaper. Kannada News, Online News, Kannada newspaperWed, 27 Apr 2016 23:28:53 GMTCopyright:(C) Thu 28 Apr 2016, 04:58:53 Bennett Coleman & Co. Ltd, http://in.indiatimes.com/policyterms/1554651.cmshttp://vijaykarnataka.indiatimes.com/photo/38810012/logo.jpgVijayKarnatakahttp://vijaykarnataka.indiatimes.com/articlelist/.cmsಮೇ 9ರಂದು ಪಾನಾಮಾ ಪೇಪರ್ಸ್‌ ಬಹಿರಂಗhttp://vijaykarnataka.indiatimes.com/news/india/Panama-Papers-to-go-public-on-May-9/articleshow/52017387.cms<img src="http://vijaykarnataka.indiatimes.com/photo/52017407/photo-panama.jpg" />ವಿಶ್ವದ ಸಿರಿವಂತ ನಾಯಕರ ಬಂಡವಾಳ ಬಯಲು ಮಾಡಿದ್ದ ‘ಪನಾಮಾ ಪೇಪರ್ಸ್‌ ಲೀಕ್’ ಹಗರಣದ ದಾಖಲೆಗಳು ಮೇ 9ರಂದು ಬಹಿರಂಗವಾಗಲಿವೆ ಎಂದು ಇಂಟರ್‌ನ್ಯಾಷನಲ್ ಕಾನ್ಸೋರ‌್ಟಿಯಮ್ ಆಫ್ ಇನ್‌ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ಐಸಿಐಜೆ) ಹೇಳಿದೆ.
ಹೊಸದಿಲ್ಲಿ: ತೆರಿಗೆಯನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಸಾಗರದಾಚೆಯ ನಾನಾ ಕಂಪೆನಿಗಳಲ್ಲಿ ಅಪಾರ ಪ್ರಮಾಣದ ಹೂಡಿಕೆ ಮಾಡಿದ ವಿಶ್ವದ ಸಿರಿವಂತ ನಾಯಕರ ಬಂಡವಾಳ ಬಯಲು ಮಾಡಿದ್ದ 'ಪನಾಮಾ ಪೇಪರ್ಸ್‌ ಲೀಕ್' ಹಗರಣದ ದಾಖಲೆಗಳು ಮೇ 9ರಂದು ಬಹಿರಂಗವಾಗಲಿವೆ ಎಂದು ಇಂಟರ್‌ನ್ಯಾಷನಲ್ ಕಾನ್ಸೋರ‌್ಟಿಯಮ್ ಆಫ್ ಇನ್‌ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ಐಸಿಐಜೆ) ಹೇಳಿದೆ.

ತೆರಿಗೆದಾರರ ಸ್ವರ್ಗ ಎನಿಸಿರುವ ಹಾಂಕಾಂಗ್‌ನಿಂದ ಅಮೆರಿಕದ ನೆವಾಡಾದವರೆಗೆ ಇರುವ 2 ಲಕ್ಷ ಕಂಪನಿ, ಟ್ರಸ್ಟ್ ಹಾಗೂ ಫೌಂಡೇಷನ್‌ಗಳಲ್ಲಿ ಸಿರಿವಂತರು ಹೂಡಿರುವ ಹಣದ ಮೂಲವನ್ನು ಸಾರ್ವಜನಿಕಗೊಳಿಸುವುದಾಗಿ ಅದು ಹೇಳಿದೆ.

ಇಡೀ ವಿಶ್ವದಲ್ಲಿಯೇ ಅಭೂತಪೂರ್ವ ರಹಸ್ಯ ದಾಖಲೆಗಳ ಸೋರಿಕೆ ಎಂದೇ ಕರೆಯಲಾಗಿರುವ ಈ ಹಗರಣದಿಂದ ಜಗತ್ತೇ ಬಿಚ್ಚಿ ಬಿದ್ದಿತ್ತು. ಐಸ್‌ಲ್ಯಾಂಡ್ ಪ್ರಧಾನಿ ಸಿಗ್ಮುಂದರ್ ಡೇವಿಡ್ ಗುನ್‌ಲಾಗ್‌ಸನ್ ಅಲ್ಲದೇ ಸ್ಪೇನ್‌ನ ಸಚಿವರೊಬ್ಬರು ರಾಜೀನಾಮೆ ನೀಡಿದ್ದರು. ಭಾರತೀಯರ ಹೆಸರೂ ಸಾಕಷ್ಟಿವೆ.

]]>
Article at Vijaykarnataka.com:52017387Wed, 27 Apr 2016 22:30:02 GMT
ಭಗತ್‌ ಸಿಂಗ್‌ ಕ್ರಾಂತಿಕಾರಿ ಭಯೋತ್ಪಾದಕ ಎಂದ ಪುಸ್ತಕhttp://vijaykarnataka.indiatimes.com/news/india/DU-book-calls-Bhagat-Singh-a-revolutionary-terrorist-courts-controversy/articleshow/52013123.cmsದಿಲ್ಲಿ ವಿಶ್ವವಿದ್ಯಾಲಯದ ಪಠ್ಯಕ್ರಮದ ಪುಸ್ತಕದಲ್ಲಿ ಭಗತ್‌ಸಿಂಗ್‌ನನ್ನು ಕ್ರಾಂತಿಕಾರಿ ಭಯೋತ್ಪಾದಕ ಎಂದು ವರ್ಣಿಸಲಾಗಿದೆ. ಈ ಬಗ್ಗೆ ಬಿಜೆಪಿ ಸದಸ್ಯ ಅನುರಾಗ್‌ ಠಾಕೂರ್‌ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ಪಠ್ಯಕ್ರಮದ ಪುಸ್ತಕದಲ್ಲಿ ಭಗತ್‌ಸಿಂಗ್‌ನನ್ನು ಕ್ರಾಂತಿಕಾರಿ ಭಯೋತ್ಪಾದಕ ಎಂದು ವರ್ಣಿಸಲಾಗಿದೆ. ಈ ಬಗ್ಗೆ ಬಿಜೆಪಿ ಸದಸ್ಯ ಅನುರಾಗ್‌ ಠಾಕೂರ್‌ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಜೊತೆಗೆ, ದೇಶಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಯಾವ ರೀತಿ ಕಲಿಸಲಾಗುತ್ತಿದೆ ಎಂಬುದರ ಬಗ್ಗೆ ಚರ್ಚೆ ನಡೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಇತಿಹಾಸಕಾರರಾದ ಬಿಫಿನ್‌ ಚಂದ್ರ ಮತ್ತು ಮೃದುಲಾ ಮುಖರ್ಜಿ ಬರೆದಿರುವ 'ಇಂಡಿಯಾಸ್‌ ಸ್ಟ್ರಗಲ್‌ ಫಾರ್‌ ಇಂಡಿಪೆಂಡೆನ್ಸ್‌' ಎಂಬ ಪುಸ್ತಕದಲ್ಲಿ ಭಗತ್‌ಸಿಂಗ್‌ನನ್ನು ಕ್ರಾಂತಿಕಾರಿ ಭಯೋತ್ಪಾದಕ ಎಂಬಂತೆ ಬರೆಯಲಾಗಿದೆ. ಅಲ್ಲದೇ ಕಾಂಗ್ರೆಸ್‌ ನಾಯಕರನ್ನು ವರ್ಚಸ್ವಿ ನಾಯಕರೆಂದು ವರ್ಣಿಸಿದ್ದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದ್ದಾರೆ.

ಭಗತ್‌ಸಿಂಗ್‌ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅವರ ಬಗ್ಗೆ ತಿರುಚಿದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಕೊಡುವುದು ಎಷ್ಟು ಸರಿ ಎಂದು ಹೇಳಿರುವ ಠಾಕೂರ್‌, ಕಾಂಗ್ರೆಸ್‌ ಮುಖಂಡರಿಗೂ ಇದಕ್ಕೂ ಸಂಬಂಧವಿದೆಯೆಂದು ಆರೋಪಿಸಿದ್ದಾರೆ.

]]>
Article at Vijaykarnataka.com:52013123Wed, 27 Apr 2016 22:30:00 GMT
ಕುದುರೆ ಏರಿ ಸಂಸತ್ತಿಗೆ ಹೊರಟ ಎಂಪಿ!http://vijaykarnataka.indiatimes.com/news/india/This-Lawmaker-Rode-A-Horse-To-Parliament-To-Protest-Odd-Even-Rule/articleshow/52013136.cms<img src="http://vijaykarnataka.indiatimes.com/photo/52017281/photo-Odd-Even Rule-Horse To Parliament.jpg" />ದಿಲ್ಲಿ ಸರಕಾರ ಜಾರಿಗೆ ತಂದಿರುವ ಸಮ - ಬೆಸ ವಾಹನ ಸಂಚಾರ ಯೋಜನೆಯನ್ನು ಕೆಲ ಬಿಜೆಪಿ ಸಂಸದರು ವಿನೂತನ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ ಪ್ರಸಂಗ ಬುಧವಾರ ನಡೆದಿದೆ.

*ಸಮ -ಬೆಸ ಯೋಜನೆಗೆ ವಿರೋಧ

ಹೊಸದಿಲ್ಲಿ: ದಿಲ್ಲಿ ಸರಕಾರ ಜಾರಿಗೆ ತಂದಿರುವ ಸಮ - ಬೆಸ ವಾಹನ ಸಂಚಾರ ಯೋಜನೆಯನ್ನು ಕೆಲ ಬಿಜೆಪಿ ಸಂಸದರು ವಿನೂತನ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ ಪ್ರಸಂಗ ಬುಧವಾರ ನಡೆದಿದೆ.

ಅಸ್ಸಾಂನ ತೇಜ್‌ಪುರ ಕ್ಷೇತ್ರದ ಬಿಜೆಪಿ ಸಂಸದ ರಾಮ್‌ ಪ್ರಸಾದ್‌ ಶರ್ಮಾ ಕುದುರೆಯನ್ನೇರಿ ಸಂಸತ್‌ ಭವನಕ್ಕೆ ಬರುವ ಪ್ರಯತ್ನ ಮಾಡಿದರಾದರೂ ಅವರನ್ನು ಪೊಲೀಸರು 'ರೈಲ್‌ ಭವನ'ದ ಹತ್ತಿರ ತಡೆದರು. ಈ ಅಶ್ವಕ್ಕೆ ಅವರು 'ಮಾಲಿನ್ಯ ಮುಕ್ತ ವಾಹನ' ಎಂಬ ನಾಮಫಲಕ ಹಾಕಿದ್ದರು! ಅಲ್ಲಿಯೇ ಇಳಿದು ಸಂಸತ್ತಿಗೆ ಆಗಮಿಸಿದ ಅವರು ಸಮ-ಬೆಸ ಯೋಜನೆಯಿಂದ ತುರ್ತು ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ದಿಲ್ಲಿ ಸರಕಾರದ ವಿರುದ್ಧ ಹರಿಹಾಯ್ದರು. ಇವರಿಗೆ ಬೆಂಬಲ ಸೂಚಿಸಿ ಮತ್ತೊಬ್ಬ ಬಿಜೆಪಿ ಸಂಸದ ವಿಜಯ್‌ ಗೋಯಲ್‌ ಅವರು ಸಮ - ಬೆಸ ಯೋಜನೆ ಕುರಿತು ಪತ್ರಿಕೆಗಳಲ್ಲಿ ಬಂದ ನಕಾರಾತ್ಮಕ ವರದಿಗಳನ್ನೇ ಪೋಸ್ಟರ್‌ ರೀತಿಯಲ್ಲಿ ಚಿತ್ರಿಸಿದ ಕಾರಿನಲ್ಲಿ ಬಂದು ಗಮನ ಸೆಳೆದರು. ಆದರೆ ಈಶಾನ್ಯ ದಿಲ್ಲಿಯ ಬಿಜೆಪಿ ಎಂಪಿ ಮನೋಜ್‌ ತಿವಾರಿ ಅವರು ಸೈಕಲ್‌ನಲ್ಲಿ ಪಾರ್ಲಿಮೆಂಟ್‌ಗೆ ಆಗಮಿಸಿ ಸಮ-ಬೆಸ ಯೋಜನೆಯನ್ನು ಬೆಂಬಲಿಸಿದರು.

ಬಸ್‌ನಲ್ಲಿ ಬರದ ಎಂಪಿಗಳು: ಎರಡನೇ ಹಂತದಲ್ಲಿ ಮತ್ತೆ ಜಾರಿಗೆ ಬಂದ ಈ ಯೋಜನೆಯಲ್ಲಿ ಸಂಸದರಿಗೆ ಹಾಗೂ ಸಚಿವರಿಗೆ ವಿನಾಯಿತಿ ನೀಡದಿರುವುದಕ್ಕೆ ಆಕ್ರೋಶಕ್ಕೆ ವ್ಯಕ್ತವಾಗಿದೆ. ಸಂಸದರಿಗೆ ತೊಂದರೆಯಾಗದಿರಲಿ ಎಂದು ಕೇಜ್ರಿವಾಲ್‌ ಸರಕಾರ ಹವಾನಿಯಂತ್ರಿತ ಬಸ್‌ಗಳ ವ್ಯವಸ್ಥೆ ಮಾಡಿತ್ತಾದರೂ ಮೊದಲ ದಿನವೇ ನೀರಸ ಪ್ರತಿಕ್ರಿಯೆಯಿತ್ತು. ಈ ಹಿನ್ನೆಲೆಯಲ್ಲಿ ಬಸ್‌ ಸೇವೆ ಸರಕಾರ ಹಿಂಪಡೆದಿತ್ತು.

]]>
Article at Vijaykarnataka.com:52013136Wed, 27 Apr 2016 22:30:00 GMT
GPS ವ್ಯವಸ್ಥೆಯಲ್ಲಿ ಇತಿಹಾಸ ಸೃಷ್ಟಿಗೆ ಇಸ್ರೊ ಸಿದ್ಧತೆhttp://vijaykarnataka.indiatimes.com/news/india/ISRO-to-launch-IRNSS-1G-to-complete-Indias-own-navigational-satellite-system/articleshow/52013362.cms<img src="http://vijaykarnataka.indiatimes.com/photo/52017031/photo-IRNSS-1G-Isro.jpg" />ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಮತ್ತೊಮ್ಮೆ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಲು ಸಿದ್ದಗೊಂಡಿದೆ. ಐಆರ್‌ಎನ್‌ಎಸ್‌ಎಸ್‌ ಸರಣಿಯ ಏಳನೇ ಹಾಗೂ ಅಂತಿಮ ಉಪಗ್ರಹ ಐಆರ್‌ಎನ್‌ಎಸ್‌ಎಸ್‌-1ಜಿ ಉಡಾವಣೆಗೆ ವೇದಿಕೆ ಸಿದ್ಧಗೊಂಡಿದೆ.

* ಇಂದು ಕಟ್ಟ ಕಡೆಯ ಪಥ ನಿರ್ದೇಶಕ ಉಪಗ್ರಹ ಉಡಾವಣೆ

* ಸ್ವಂತ ಜಿಪಿಎಸ್‌ ವ್ಯವಸ್ಥೆ ಹೊಂದುವ ಕನಸು ನನಸು

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಮತ್ತೊಮ್ಮೆ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಲು ಸಿದ್ದಗೊಂಡಿದೆ. ಈಗಾಗಲೇ ಮಂಗಳಯಾನ ಯಶಸ್ವಿಯಾಗಿ ಪೂರೈಸಿ ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಿರುವ ಇಸ್ರೊ, ಸ್ವದೇಶಿ ಪಥ ನಿರ್ದೇಶಕ ವ್ಯವಸ್ಥೆಯ ಕೊನೆಯ ಹೆಜ್ಜೆಯನ್ನು ಗುರುವಾರ ಇರಿಸುತ್ತಿದೆ.

ಸ್ವಂತ ಜಿಪಿಎಸ್‌ (ಭೌಗೋಳಿಕ ನಕ್ಷಾ ವ್ಯವಸ್ಥೆ) ವ್ಯವಸ್ಥೆ ಸಾಕಾರಗೊಳ್ಳಲು ನಭಕ್ಕೆ ಸೇರಬೇಕಿರುವ ಐಆರ್‌ಎನ್‌ಎಸ್‌ಎಸ್‌ ಸರಣಿಯ ಏಳನೇ ಹಾಗೂ ಅಂತಿಮ ಉಪಗ್ರಹ ಐಆರ್‌ಎನ್‌ಎಸ್‌ಎಸ್‌-1ಜಿ ಉಡಾವಣೆಗೆ ವೇದಿಕೆ ಸಿದ್ಧಗೊಂಡಿದೆ. ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ -ಸಿ33 ರಾಕೆಟ್‌ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 12.50ಕ್ಕೆ ಸರಿಯಾಗಿ ಆಕಾಶಕ್ಕೇರಲಿದೆ.

''ಕ್ಷಣಗಣನೆ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ. ರಾಕೆಟ್‌ ಉಡಾವಣೆಗೆ ಸಕಲ ಸಿದ್ಧತೆಯೂ ಮುಗಿದಿದೆ,'' ಎಂದು ಇಸ್ರೊ ಮುಖ್ಯಸ್ಥ ಕಿರಣ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಸ್ಪಷ್ಟತೆ ಎಷ್ಟು ?

ಸದ್ಯ ಭಾರತ ನಭಕ್ಕೆ ತಲುಪಿಸಿರುವ ಐಆರ್‌ಎನ್‌ಎಸ್‌ಎಸ್‌ ಸರಣಿಯ ಆರ ಉಪಗ್ರಹಗಳ ಮೂಲಕ ಭೂಮಿಯ ಮೇಲಿರುವ 20 ಮೀಟರ್‌ನಷ್ಟು ಚಿಕ್ಕ ಸ್ಥಳವನ್ನೂ ದಿನದ 24 ಗಂಟೆಗಳಲ್ಲೂ ಸ್ಪಷ್ಟವಾಗಿ ಗುರುತಿಸಬಹುದು. ಏಳನೇ ಉಪಗ್ರಹ ಉಡಾವಣೆ ಯಶಸ್ವಿಯಾದರೆ ಜಿಪಿಎಸ್‌ ವ್ಯವಸ್ಥೆಯು ಇನ್ನಷ್ಟು ನಿಖರ ಮಾಹಿತಿಗಳನ್ನು ನೀಡಲಿದೆ ಎಂದು ಇಸ್ರೊ ಹೇಳಿದೆ.

ಉಪಗ್ರಹ ಬಗ್ಗೆ

ತೂಕ -1425 ಕೆಜಿ

ಎತ್ತರ- 44.4 ಮೀಟರ್‌

ಜೀವಿತಾವಧಿ-12 ವರ್ಷ

ವ್ಯವಸ್ಥೆ ಹೇಗೆ?

ಐಆರ್‌ಎನ್‌ಎಸ್‌ಎಸ್‌ ಸರಣಿಯ ಮೊದಲ ನಾಲ್ಕು ಉಪಗ್ರಹಗಳು ಉಡಾವಣೆಯಾದಾಗಲೇ ಭಾರತದ ಸ್ವಂತ ಜಿಪಿಎಸ್‌ ವ್ಯವಸ್ಥೆ ಕಾರಾರ‍ಯಚರಣೆ ಆರಂಭಗೊಂಡಿದೆ. ಇನ್ನು ಮೂರು ಉಪಗ್ರಹಗಳು ವ್ಯವಸ್ಥೆಗೆ ಇನ್ನಷ್ಟು ನಿಖರತೆಯನ್ನು ಒದಗಿಸಲಿವೆ.

ಈವರೆಗೆ ತಲುಪಿದ ಉಪಗ್ರಹಗಳು

ಐಆರ್‌ಎನ್‌ಎಸ್‌ಎಸ್‌ -1ಎ

ಐಆರ್‌ಎನ್‌ಎಸ್‌ಎಸ್‌ -1ಬಿ

ಐಆರ್‌ಎನ್‌ಎಸ್‌ಎಸ್‌ -1ಸಿ

ಐಆರ್‌ಎನ್‌ಎಸ್‌ಎಸ್‌ -1ಡಿ

ಐಆರ್‌ಎನ್‌ಎಸ್‌ಎಸ್‌ -1ಇ

ಐಆರ್‌ಎನ್‌ಎಸ್‌ಎಸ್‌ -1ಎಫ್‌

ಉಪಯೋಗವೇನು?

ಜಿಪಿಎಸ್‌ ವ್ಯವಸ್ಥೆ ಭೂಮಿಯ ನಿರ್ದಿಷ್ಟ ಸ್ಥಳಗಳು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುತ್ತದೆ. ಪಥನಿರ್ದೇಶಕ ಉಪಗ್ರಹದ ನೆರವಿನಿಂದ ಇಷ್ಟಪಟ್ಟ ಸ್ಥಳಗಳು ಎಲ್ಲಿವೆ ಅಲ್ಲಿಗೆ ತಲುಪುವ ಮಾರ್ಗ ಯಾವುದು, ನಾವೀಗ ಎಲ್ಲಿದ್ದೇವೆ ಎಂಬೆಲ್ಲಾ ಮಾಹಿತಿಗಳನ್ನೂ ತಿಳಿದುಕೊಳ್ಳಬಹುದು. ಹವಾಮಾನ ಮುನ್ಸೂಚನೆಗೂ ಇದು ನೆರವಾಗುತ್ತದೆ. ಇದು ನಾಗರಿಕರಿಗೆ ಹಾಗೂ ಮಿಲಿಟರಿ ಚಟುವಟಿಕೆಗಳಿಗೆ ನೆರವಾಗುತ್ತದೆ. ಅದರಲ್ಲೂ ವಿಕೋಪ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಪರಿಚಿತ ಸ್ಥಳಗಳಲ್ಲಿ ವಿಳಾಸಗಳನ್ನು ಹುಡುಕಲು ನೆರವಿಗೆ ಬರಲಿದೆ.

ತಗಲುವ ವೆಚ್ಚ

ಭಾರತದ ಈ ಮಹತ್ವಪೂರ್ಣ ಯೋಜನೆಗೆ 1420 ಶತಕೋಟಿ ರೂಪಾಯಿಗಳು ಖರ್ಚಾಗಲಿವೆ ಎಂದು ಇಸ್ರೋ ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ಯೋಜನೆ ಪೂರ್ಣಗೊಂಡ ನಂತರ ಭಾರತ ಸ್ವದೇಶಿ ನಿರ್ಮಿತ ಮಾರ್ಗದರ್ಶಿ ವ್ಯವಸ್ಥೆಯನ್ನು ಹೊಂದಿರುವ ದೇಶ ಎಂಬ ಹೆಮ್ಮೆಗೆ ಪಾತ್ರವಾಗಲಿದೆ.

ಅಮೆರಿಕದ ಹಂಗಿನಿಂದ ಮುಕ್ತಿ

ನೀವು ಪ್ರಯಾಣಿಸುತ್ತಿರುವ ಸ್ಥಳದ ಕುರಿತು ನಕ್ಷೆಯ ಮೂಲಕ ನಿರ್ದೇಶನ ಪಡೆದುಕೊಳ್ಳುವ ಆಧುನಿಕ ತಂತ್ರಜ್ಞಾನ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ...) ಈಗ ಎಲ್ಲೆಡೆ ಸಾಮಾನ್ಯ. ಬಹುತೇಕ ಎಲ್ಲ ಸ್ಟಾರ್ಟ್‌ಫೋನ್‌ಗಳಲ್ಲೂ ಈ ವ್ಯವಸ್ಥೆ ಇದೆ. ಆದರೆ ಈಗ ನಾವು ಬಳಸುತ್ತಿರುವ ಜಿಪಿಎಸ್‌ ವ್ಯವಸ್ಥೆ ಅಮೆರಿಕದ ಮಾರ್ಗದರ್ಶಿ ಉಪಗ್ರಹವನ್ನಾಧರಿಸಿದ್ದು. ಅಮೆರಿಕ ಒಂದು ವೇಳೆ ಈ ತಂತ್ರಜ್ಞಾನದ ಪೂರೈಕೆಯನ್ನು ಸ್ಥಗಿತಗೊಳಿಸಿದರೆ ನಾವು ದಿಕ್ಕೇ ತೋಚದಂತೆ ಕುಳಿತುಕೊಳ್ಳಬೇಕಾಗಬಹುದು. ಅಮೆರಿಕ ಮೊದಲ ಮಾರ್ಗದರ್ಶಿ ಉಪಗ್ರಹವನ್ನು 1973ರಲ್ಲಿ ಉಡಾಯಿಸಿದ್ದು, 1960ರ ವೇಳೆಗೆ 24 ಉಪಗ್ರಹಗಳ ಮೂಲಕ ಈ ಯೋಜನೆಯನ್ನು ಪೂರ್ಣಗೊಳಿಸಿತು.

ಈಗ ಭಾರತ ಅಮೆರಿಕದ ಜಿಪಿಎಸ್‌ಗೆ ಪರಾರ‍ಯಯವಾಗಿ ತನ್ನದೇ ಆದ ಹೊಸ 'ಪಥ ನಿರ್ದೇಶಕ' ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಆರಂಭದಲ್ಲಿ ಎಲ್ಲ ದೇಶಗಳು ಅಮೆರಿಕದ ಜಿಪಿಎಸ್‌ಅನ್ನೇ ಬಳಸುತ್ತಿದ್ದವು. ಆದರೆ ಅಮೆರಿಕದ ಸ್ವಾಮ್ಯದಲ್ಲಿರುವ ತಂತ್ರಜ್ಞಾನದ ಮೇಲೆ ಪೂರ್ಣ ನಂಬಿಕೆ ಇಡುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಬಂದ ಹಲವು ರಾಷ್ಟ್ರಗಳು ತಮ್ಮದೇ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾದವು. ಯುದ್ಧ ಮತ್ತು ಘರ್ಷಣೆಯ ಸಮಯದಲ್ಲಿ ಆ ದೇಶ ತನ್ನ ಜಿಪಿಎಸ್‌ ವ್ಯವಸ್ಥೆಯನ್ನು ಪೂರ್ಣ ಕಡಿತಗೊಳಿಸಬಹುದು. ಈ ಸಮಸ್ಯೆ ತಪ್ಪಿಸಲು ರಷ್ಯಾ ಗ್ಲೊನಾಸ್‌ ಎಂಬ ವ್ಯವಸ್ಥೆ ಅಳವಡಿಸಿಕೊಂಡಿತು. ಚೀನಾ ಈಚೆಗಷ್ಟೇ ತನ್ನದೇ ಆದ ನ್ಯಾವಿಗೇಷನ್‌ ವ್ಯವಸ್ಥೆ ಆರಂಭಿಸಿದೆ. ಯುರೋಪ್‌ ಗೆಲಿಲಿಯೋ ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

]]>
Article at Vijaykarnataka.com:52013362Wed, 27 Apr 2016 22:30:00 GMT
ನವ ವಿವಾಹಿತ ಬಿಎಸ್‌ಎಫ್‌ ಯೋಧರಿಗೆ ಬಂಪರ್‌ ಕೊಡುಗೆhttp://vijaykarnataka.indiatimes.com/news/india/Newly-married-BSF-jawans-can-now-stay-with-wives-at-border/articleshow/52013514.cmsಹೊಸದಾಗಿ ಮದುವೆಯಾಗಿರುವ ಸೈನಿಕರಿಗೆ ಮೊದಲ ಒಂದು ವರ್ಷ ಪತ್ನಿಯೊಂದಿಗೆ ವಾಸಿಸುವ ಅವಕಾಶವನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ನೀಡಿದೆ.

ಜೈಸಲ್ಮೇರ್‌: ಹೊಸದಾಗಿ ಮದುವೆಯಾಗಿರುವ ಸೈನಿಕರಿಗೆ ಮೊದಲ ಒಂದು ವರ್ಷ ಪತ್ನಿಯೊಂದಿಗೆ ವಾಸಿಸುವ ಅವಕಾಶವನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ನೀಡಿದೆ.

ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನವ ವಿವಾಹಿತ ಸೈನಿಕರಿಗೆ ಪತ್ನಿಯೊಂದಿಗೆ ವಾಸಿಸಲು ಅಗತ್ಯವಾದ ಮೂಲಸೌಕರ‍್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನವ ವಿವಾಹಿತ ಯೋಧರು ಕುಟುಂಬ ಸದಸ್ಯರ ಅಗಲಿಕೆಯಿಂದ ಬಹಳ ಒತ್ತಡ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಪರಿಹಾರ ನೀಡಲು ಎರಡು ದಿನಗಳ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಸ್‌ಎಫ್‌ನ ರಾಜಸ್ಥಾನ ವಲಯದ ಐಜಿ ಬಿ.ಆರ್‌ ಮೇಘವಾಲ್‌ ತಿಳಿಸಿದ್ದಾರೆ.

ಹೊಸದಾಗಿ ಮದುವೆಯಾದ ಸೈನಿಕರಿಗೆ ಪತ್ನಿಯೊಂದಿಗೆ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಯೋಧರ ಬಹುದಿನ ಬೇಡಿಕೆಯಾಗಿದೆ. ಕುಟುಂಬವನ್ನು ದೂರವಿಡುವುದರಿಂದ ಸೈನಿಕರಿಗೆ ಮಾನಸಿಕ ಒತ್ತಡ ಹೆಚ್ಚುತ್ತಿದ್ದು, ಅದು ಅವರ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ. ಈ ಸಮಸ್ಯೆ ನಿವಾರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಮತ್ತು ಗಡಿ ಸನಿಹದ ಗ್ರಾಮಗಳಲ್ಲಿ ಸೈನಿಕರ ಕುಟುಂಬ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಬಿಎಸ್‌ಎಫ್‌ ನಿರ್ಧರಿಸಿದೆ.

]]>
Article at Vijaykarnataka.com:52013514Wed, 27 Apr 2016 22:30:00 GMT
ಕಾಂಡೋಮ ಮೇಲೆ ’ಅಶ್ಲೀಲ ಚಿತ್ರ’: ವರದಿ ಕೇಳಿದ ಸುಪ್ರೀಂhttp://vijaykarnataka.indiatimes.com/news/india/Indias-Supreme-Court-Wants-To-Know-If-Condom-Ads-Are-Too-Sexy-Obscene/articleshow/52013520.cms<img src="http://vijaykarnataka.indiatimes.com/photo/52017244/photo-condom picture.jpg" />ಕಾಂಡೋಮ… ಸಹಿತ ಲೈಂಗಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಸ್ತುಗಳ ಪ್ಯಾಕ್‌ಗಳ ಮೇಲೆ ಅಶ್ಲೀಲ ಚಿತ್ರಗಳಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕೇಂದ್ರದಿಂದ ವರದಿ ಕೇಳಿದೆ.

ಹೊಸದಿಲ್ಲಿ: ಕಾಂಡೋಮ... ಸಹಿತ ಲೈಂಗಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಸ್ತುಗಳ ಪ್ಯಾಕ್‌ಗಳ ಮೇಲೆ ಅಶ್ಲೀಲ ಚಿತ್ರಗಳಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕೇಂದ್ರದಿಂದ ವರದಿ ಕೇಳಿದೆ.

ಕಾಂಡೋಮ್‌, ಗರ್ಭನಿರೋಧಕ ಸಹಿತ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳ್ನು ಮಾರಾಟ ಮಾಡುವ ಕಂಪನಿಗಳು ತಮ್ಮ ಉತ್ಪನ್ನಗಳ ಪ್ಯಾಕ್‌ಗಳಲ್ಲಿ ಅಶ್ಲೀಲ ಚಿತ್ರಗಳನ್ನು ಬಳಸಿದ್ದರೆ, ಪ್ರಸ್ತುತ ಕಂಪನಿಗಳು ನಿಯಮವನ್ನು ಉಲ್ಲಂಘನೆ ಮಾಡುತ್ತಿವೆಯೇ? ಎಂಬುದರ ಬಗ್ಗೆ ವಿವರ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ನೇತೃತ್ವದ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.

ಲೈಂಗಿಕ ಉತ್ಪನ್ನಗಳ ಜಾಹೀರಾತುಗಳು 2008ರಲ್ಲಿ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿವೆ ಎಂದು ದೂರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಲೈಂಗಿಕ ಉತ್ಪನ್ನಗಳ ಕಂಪನಿಗಳ ಜಾಹೀರಾತುಗಳ ಸಮಗ್ರ ವಿವರ ಒಳಗೊಂಡ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಣಿಂದರ್‌ ಸಿಂಗ್‌ ಅವರಿಗೆ ಸೂಚಿಸಿದ್ದಾರೆ.

''ಈ ಜಾಹೀರಾತುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೋ ಬೇಡವೋ ಎಂಬುದನ್ನು ನೀವೇ ಹೇಳಿ. ಇಂಥಾ ಜಾಹೀರಾತುಗಳನ್ನು ನೋಡಿ, ಇದರ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟ ಪಡಿಸಿ,'' ಎಂದು ಸಿಂಗ್‌ ಅವರಿಗೆ ನ್ಯಾಯಪೀಠ ತಿಳಿಸಿದೆ.

]]>
Article at Vijaykarnataka.com:52013520Wed, 27 Apr 2016 22:30:00 GMT
ಪುಸ್ತಕವಾಗಿ ಬರಲಿದೆ ಕನ್ಹಯ್ಯ ಜೀವನhttp://vijaykarnataka.indiatimes.com/news/india/Kanhaiya-Kumar-to-come-out-with-a-book-titled-Bihar-to-Tihar/articleshow/52013550.cmsದೇಶಾದ್ಯಂತ ರಾಷ್ಟ್ರೀಯತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಹೊಸ ಕ್ರಾಂತಿಯ ಅಲೆ ಸೃಷ್ಟಿಗೆ ಕಾರಣವಾದ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ ಅವರ ಜೀವನವು ಪುಸ್ತಕವಾಗಿ ಹೊರಬರಲಿದೆ.

ಹೊಸದಿಲ್ಲಿ: ದೇಶಾದ್ಯಂತ ರಾಷ್ಟ್ರೀಯತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಹೊಸ ಕ್ರಾಂತಿಯ ಅಲೆ ಸೃಷ್ಟಿಗೆ ಕಾರಣವಾದ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ ಅವರ ಜೀವನವು ಪುಸ್ತಕವಾಗಿ ಹೊರಬರಲಿದೆ.

'ಬಿಹಾರ್‌ ಟು ತಿಹಾರ್‌' ಹೆಸರಿನ ಈ ಪುಸ್ತಕವು ಕನ್ಹಯ್ಯ ಕುಮಾರ್‌ ಅವರ ಶಾಲಾ ಜೀವನದಿಂದ ಹಿಡಿದು ವಿದ್ಯಾರ್ಥಿ ರಾಜಕೀಯಕ್ಕಿಳಿದು, ಬಂಧನಕ್ಕೊಳಗಾದ ವಿಚಾರಗಳನ್ನು ಒಳಗೊಂಡಿರಲಿದೆ.

''ಮನುಷ್ಯರನ್ನು ಕೊಲ್ಲಬಹುದು. ಆದರೆ, ಅವರ ಆಲೋಚನೆಗಳನ್ನು ಕೊಲ್ಲುವುದು ಅಸಾಧ್ಯ ಎಂದು ಭಗತ್‌ ಸಿಂಗ್‌ ಹೇಳಿದ್ದರು. ನಮ್ಮ ಆಲೋಚನೆಗಳು, ಚಿಂತನೆಗಳು ಸದಾಕಾಲ ಜೀವಂತವಾಗಿರಬೇಕೆಂಬ ಉದ್ದೇಶದಿಂದ ಪುಸ್ತಕ ಬರೆಯಲಾಗುತ್ತಿದೆ,'' ಎಂದು ಕನ್ಹಯ್ಯ ತಿಳಿಸಿದ್ದಾರೆ.

ಕನ್ಹಯ್ಯ ಬರೆಯುತ್ತಿರುವ ಈ ಪುಸ್ತಕವನ್ನು ಜಗರ್ನಾಟ್‌ ಪಬ್ಲಿಕೇಷನ್‌ ಹೊರತರುತ್ತಿದೆ.

]]>
Article at Vijaykarnataka.com:52013550Wed, 27 Apr 2016 22:30:00 GMT
ಕಾಪ್ಟರ್‌ ಸಂಚಲನ: ಸೋನಿಯಾಗೆ ಕಳಂಕhttp://vijaykarnataka.indiatimes.com/news/india/Sonia-Manmohan-Dare-BJP-Over-AgustaWestland-Deal/articleshow/52014036.cmsಯುಪಿಎ ಸರಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಡೆದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಪಾತ್ರವೂ ಇದೆ ಎಂದು ಇಟಲಿ ಕೋರ್ಟ್‌ ನೀಡಿರುವ ತೀರ್ಪು ಬುಧವಾರ ರಾಜಕೀಯ ಸಂಚಲನ ಸೃಷ್ಟಿಸಿತು.

*ರಾಜ್ಯಸಭೆಯಲ್ಲಿ ವಾಗ್ವಾದ *ಸೋನಿಯಾಗೆ ಅಂಟಿದ ಕಳಂಕ

ಹೊಸದಿಲ್ಲಿ: ಯುಪಿಎ ಸರಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಡೆದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಪಾತ್ರವೂ ಇದೆ ಎಂದು ಇಟಲಿ ಕೋರ್ಟ್‌ ನೀಡಿರುವ ತೀರ್ಪು ಬುಧವಾರ ರಾಜಕೀಯ ಸಂಚಲನ ಸೃಷ್ಟಿಸಿತು.

ಹಗರಣ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿ ಆಡಳಿತ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್‌ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು. ಕಾಪ್ಟರ್‌ ಖರೀದಿ ಭ್ರಷ್ಟಾಚಾರದಲ್ಲಿ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಶಾಮೀಲಾಗಿರುವ ಬಗ್ಗೆ ದಾಖಲೆಗಳನ್ನು ನೀಡಿದರೆ ಕೊಲೆ ಆರೋಪಕ್ಕೆ ಗುರಿಯಾಗಿರುವ ಇಟಲಿಯ ನಾವಿಕರನ್ನು ಬಿಡುಗಡೆ ಮಾಡುವ ರಹಸ್ಯ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು ಎಂಬ ಆರೋಪವನ್ನೂ ಕಾಂಗ್ರೆಸ್‌ ಮಾಡಿತು.

ಆದರೆ, ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಇಟಲಿ ಪ್ರಧಾನಿ ಜತೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆಯನ್ನೇ ನಡೆಸಿಲ್ಲ. ಹಾಗಾಗಿ ಇಬ್ಬರ ನಡುವೆ ಒಪ್ಪಂದ ಏರ್ಪಟ್ಟಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಲಾಯ ತಿಳಿಸಿದೆ.

ತಮ್ಮನ್ನು ಉದ್ದೇಶಪೂರ್ವಕವಾಗಿ ಈ ಹಗರಣದಲ್ಲಿ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಸೋನಿಯಾ ಗಾಂಧಿ, ಇಂತಹ ಆರೋಪಗಳಿಂದ ತಾವು ವಿಚಲಿತರಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅಗಸ್ಟಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದು ನಿಜವಾದರೆ ಕಾಂಗ್ರೆಸ್‌ ಅದಕ್ಕೆ ದಾಖಲೆ ನೀಡಲಿ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಸವಾಲು ಹಾಕಿದ್ದಾರೆ.


]]>
Article at Vijaykarnataka.com:52014036Wed, 27 Apr 2016 22:30:00 GMT
ಜೆಇಇ ಪರೀಕ್ಷೆ ಫಲಿತಾಂಶ ಪ್ರಕಟhttp://vijaykarnataka.indiatimes.com/news/india/Joint-Entrance-Exam-JEE-Main-results-2016-declared-today-check-jeemain-nic-in-cbseresults-nic-in-198228-candidates-clear-JEE-Main/articleshow/52014169.cmsಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಸಿಬಿಎಸ್‌ಇ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ (ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮ್‌ - ಜೆಇಇ) ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.

ಹೊಸದಿಲ್ಲಿ: ಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಸಿಬಿಎಸ್‌ಇ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ (ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮ್‌ - ಜೆಇಇ) ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಆದರೆ ಟಾಪರ್ಸ್‌ ಲಿಸ್ಟ್‌ ಇನ್ನೂ ಬಹಿರಂಗಗೊಂಡಿಲ್ಲ. ಇಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ದೇಶದ ಎಂಟು ಐಐಟಿಗಳು, 32 ಎನ್‌ಐಟಿಗಳು, 18 ಐಐಐಟಿಗಳು ಮತ್ತು 19 ಜಿಎಫ್‌ಟಿಐ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅವಕಾಶ ಸಿಗಲಿದೆ.

ಪ್ರಸಕ್ತ ಸಾಲಿನಲ್ಲಿ 12 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ದೇಶದ 123 ನಗರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪತ್ರಿಕೆ 1 ಮತ್ತು ಪತ್ರಿಕೆ 2 ಎಂಬ ಎರಡು ಹಂತದ ಪರೀಕ್ಷೆಗಳು ಕ್ರಮವಾಗಿ ಏಪ್ರಿಲ್‌ 3 ಮತ್ತು ಮತ್ತು 9ರಂದು ನಡೆದಿದ್ದವು. ಇದರಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮೇನಲ್ಲಿ ನಡೆಯಲಿರುವ ಜೆಇಇ ಅಡ್ವಾನ್ಸ್‌ ಪರೀಕ್ಷೆಗೆ ಕುಳಿತುಕೊಳ್ಳುವ ಅರ್ಹತೆ ಪಡೆಯುವರು.ಇದಕ್ಕೆ ನೋಂದಣಿ ಕಾರ್ಯ ಏ.29ಕ್ಕೆ ಶುರುವಾಗಿ, ಏಪ್ರಿಲ್‌ 4ಕ್ಕೆ ಕೊನೆಗೊಳ್ಳಲಿದೆ.

]]>
Article at Vijaykarnataka.com:52014169Wed, 27 Apr 2016 22:30:00 GMT
ಕಾಪ್ಟರ್‌ ಡೀಲ್‌ ಸಂಕಷ್ಟದಲ್ಲಿ ಕಾಂಗ್ರೆಸ್‌http://vijaykarnataka.indiatimes.com/news/india/Italian-Court-judgment-exposing-Sonia-Gandhi-Manmohan-Singh-in-AgustaWestland-Chopper-Deal/articleshow/52014399.cms*ಅಗಸ್ಟಾ ಹೆಲಿಕಾಪ್ಟರ್‌ ಖರೀದಿಯಲ್ಲಿ ಕಿಕ್‌ಬ್ಯಾಕ್‌ *ಪ್ರಕರಣಕ್ಕೆ ಜೀವ ಕೊಟ್ಟ ಆರೋಪ ನಿರಾಕರಿಸಿದ ಮೋದಿ ಸರಕಾರ *ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದು ಕಾಂಗ್ರೆಸ್‌ ಅಲ್ಲ ...

*ಅಗಸ್ಟಾ ಹೆಲಿಕಾಪ್ಟರ್‌ ಖರೀದಿಯಲ್ಲಿ ಕಿಕ್‌ಬ್ಯಾಕ್‌

*ಪ್ರಕರಣಕ್ಕೆ ಜೀವ ಕೊಟ್ಟ ಆರೋಪ ನಿರಾಕರಿಸಿದ ಮೋದಿ ಸರಕಾರ

*ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದು ಕಾಂಗ್ರೆಸ್‌ ಅಲ್ಲ ಎನ್‌ಡಿಎ ಎಂದ ಪರಿಕ್ಕರ್‌

ಹೊಸದಿಲ್ಲಿ: ಕೇರಳದ ಕಚತೀವು ಎಂಬಲ್ಲಿ ಭಾರತೀಯ ಬೆಸ್ತರನ್ನು ಕೊಂದ ಆರೋಪ ಎದುರಿಸುತ್ತಿರುವ ಇಟಲಿಯ ಇಬ್ಬರು ನಾವಿಕರ ಬಿಡುಗಡೆಗೆ ಪ್ರತಿಯಾಗಿ ಸೋನಿಯಾ ಗಾಂಧಿ ಕುಟುಂಬದ ಸಮಗ್ರ ಮಾಹಿತಿ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪಿಎಂ ಜತೆ ಒಪ್ಪಂದ ಮಾಡಿಕೊಂಡಿದ್ದಾರೆಂಬ ಮಾಧ್ಯಮಗಳ ವರದಿ ಶುದ್ಧ ಸುಳ್ಳು ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

2015ರ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆ ಸಮಾವೇಶದ ನೇಪಥ್ಯದಲ್ಲಿ ಇಟಲಿ ಪ್ರಧಾನಿ ಮಟ್ಟೆವೊ ರೆಂಜಿ ಜತೆ ಮೋದಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ವರದಿ ಸುಳ್ಳೋ ನಿಜವೋ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಅಜಾದ್‌ ಅವರು ಸಂಸತ್‌ನಲ್ಲಿ ಬುಧವಾರ ಕೇಳಿದ ಪ್ರಶ್ನೆಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

''ಉಭಯ ದೇಶಗಳ ಪ್ರಧಾನಿಗಳು ಸಭೆ ನಡೆಸಿದ ನಂತರವೇ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಡೀಲ್‌ ಕುರಿತ ತೀರ್ಪು ಹೊರಬಿದ್ದಿದೆ. ಕೇಂದ್ರ ಸರಕಾರವು ಅದೇ ಸಮಯಕ್ಕೆ ಇಟಲಿ ನಾವಿಕರ ಬಿಡುಗಡೆಗೆ ಮನಸ್ಸು ಮಾಡಿದೆ. ಇದರ ಅರ್ಥ ಮೋದಿ ಹಾಗೂ ಮಟ್ಟೆವೊ ಅವರ ನಡುವೆ ನಡೆದ ಸಭೆಯಲ್ಲಿ ಡೀಲ್‌ ಕುದರಿದ್ದು ನಿಜ ಇರಬಹುದು,'' ಎಂದು ಗುಲಾಂ ನಬಿ ಅವರು ತಿಳಿಸಿದರು.

''ಭ್ರಷ್ಟಾಚಾರ ಆರೋಪ ಬಂದ ಕೂಡಲೇ ಯುಪಿಎ ಸರಕಾರವು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತು. ಹೆಲಿಕಾಪ್ಟರ್‌ ಡೀಲ್‌ಗಾಗಿ ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್‌ ಪಡೆಯಲಾಗಿದೆ. ಅಷ್ಟರಲ್ಲಾಗಲೇ ಮೂರು ಹೆಲಿಕಾಪ್ಟರ್‌ಗಳು ಭಾರತಕ್ಕೆ ಬಂದಿದ್ದವು. ಅವನ್ನು ನಾವು ವಾಪಸ್‌ ಕೊಟ್ಟಿಲ್ಲ. ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯನ್ನು ಮೇಕ್‌ ಇನ್‌ ಇಂಡಿಯಾ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಹಿಂದಿನ ಮರ್ಮವೇನು?,'' ಎಂದೂ ಗುಲಾಂ ನಬಿ ಅವರು ಪ್ರಶ್ನಿಸಿದರು.

ನಬಿ ಅವರ ಆರೋಪದಿಂದ ಖುದ್ದುಹೋದ ಜೇಟ್ಲಿ, ಸಭೆ ನಡೆದಿಲ್ಲ ಎಂಬುದಾಗಿ ಈಗಾಗಲೇ ಸ್ಪಷ್ಟಪಡಿಸಿರುವುದನ್ನು ಅವರ ಗಮನಕ್ಕೆ ತಂದರು.

ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ರೆಂಜಿ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆಯೇ ನಡೆದಿಲ್ಲ. ಹಾಗಾಗಿ ಈ ರೀತಿಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ವಿದೇಶಾಂಗ ವ್ಯವಹಾರಗಳ ಖಾತೆಯೂ ಸ್ಪಷ್ಟಪಡಿಸಿದೆ.

ಇಂತಹ ಆರೋಪ ಮಾಡಿದ ಕಾಪ್ಟರ್‌ ಡೀಲ್‌ನ ಮಧ್ಯವರ್ತಿ ಜೇಮ್ಸ್‌ ಕ್ರಿಸ್ಟಿಯಾನ ಮಿಚೆಲ್‌ ವಿರುದ್ಧದ ಅನೇಕ ಪ್ರಕರಣಗಳ ಬಗ್ಗೆ ಭಾರತದ ಅನೇಕ ಕಾನೂನು ಜಾರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಿಚೆಲ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಸಭೆಯಲ್ಲಿ ಕೋಲಾಹಲ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಸೋನಿಯಾ ಹೆಸರು ಇದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್‌ ಸ್ವಾಮಿ ಹೇಳಿದ್ದೇ ತಡ ರಾಜ್ಯ ಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಸ್ವಾಮಿ ವಿರುದ್ಧ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದ್ದು, ಕಲಾಪವನ್ನು ಮುಂದೂಡಲಾಯಿತು.

ಭಯಗೊಂಡಿಲ್ಲ: ಸೋನಿಯಾ

ಅಗಸ್ಟಾ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಉಪಾಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರಕಾರ ಸುಮ್ಮನೆ ತಮ್ಮ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದ್ದಾರೆ.

''ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರಕಾರವೇ ಅಧಿಕಾರದಲ್ಲಿದೆ. ಈ ಪ್ರಕರಣದಲ್ಲಿ ಸರಕಾರ ಏಕೆ ತನಿಖೆ ನಡೆಸಲಿಲ್ಲ?,'' ಎಂದು ಪ್ರಶ್ನಿಸಿರುವ ಸೋನಿಯಾ, ''ನನ್ನದೇನೂ ತಪ್ಪಿಲ್ಲ. ಹಾಗಾಗಿ ನಾನು ಹೆದರುವುದಿಲ್ಲ. ಬೇಕಿದ್ದರೆ ತನಿಖೆ ನಡೆಸಲಿ. ನಾನು ಸಿದ್ಧಳಿದ್ದೇನೆ. ವಿನಾ ಕಾರಣ ನನ್ನ ಚಾರಿತ್ರ್ಯವಧೆ ನಡೆಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಸಾಕ್ಷಿ ಇದ್ದರೆ ನಾನು ಅಪರಾಧಿ ಎಂದು ಸಾಭೀತುಪಡಿಸಲಿ,'' ಎಂದು ಸೋನಿಯಾ ಸವಾಲು ಹಾಕಿದರು.

ಕಪ್ಪು ಪಟ್ಟಿಗೆ ಸೇರಿಸಿದ್ದು ಎನ್‌ಡಿಎ ಸರಕಾರ: ಪರಿಕರ್‌

''ಭ್ರಷ್ಟಾಚಾರ ಆರೋಪ ಹೊತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಇಂಡೋ ಇಟಾಲಿಯನ್‌ ಹೆಲಿಕಾಪ್ಟರ್‌ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದೆ ಎನ್ನುವುದು ಸುಳ್ಳು. ಒಂದು ವೇಳೆ ಕಾಂಗ್ರೆಸ್‌ ನಾಯಕರು ಹೇಳುತ್ತಿರುವುದೇ ನಿಜವಾದರೆ, ಕಪ್ಪು ಪಟ್ಟಿಗೆ ಸೇರಿಸಿದ ಆದೇಶದ ಪ್ರತಿಯನ್ನು ಮಂಡಿಸಲಿ,'' ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಸವಾಲು ಹಾಕಿದ್ದಾರೆ.

''ಈ ಕುರಿತು ಸದ್ಯದಲ್ಲೇ ಸಂಸತ್‌ನಲ್ಲಿ ವಿವರವಾಗಿ ಮಾತನಾಡುತ್ತೇನೆ. ಇಟಲಿ ಕೋರ್ಟ್‌ ನೀಡಿರುವ ತೀರ್ಪಿನ ಪ್ರತಿಯನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಬೇಕಿದೆ. ಇದಕ್ಕೆ ಕನಿಷ್ಠ 8ರಿಂದ 10 ದಿನ ಹಿಡಿಯುತ್ತದೆ,'' ಎಂದು ಹೇಳಿದರು.

''ಅಗಸ್ಟಾ ಕಂಪನಿಯನ್ನು ಯುಪಿಎ ಸರಕಾರ ಕಪ್ಪು ಪಟ್ಟಿಗೆ ಸೇರಿಸಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಯಾವ್ಯಾವ ವೈಮಾನಿಕ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು 2014 ಫೆಬ್ರವರಿ 5ರಂದು ರಕ್ಷಣಾ ಸಚಿವರಾಗಿದ್ದ ಎ ಕೆ ಆ್ಯಂಟನಿ ಸಂಸತ್‌ಗೆ ಈ ಕುರಿತ ವಿವರ ನೀಡಿದ್ದರು. ಆ ವೇಳೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿ ಹೆಸರನ್ನು ಪ್ರಸ್ತಾಪಿಸಿಲ್ಲ,'' ಎಂದು ಪರಿಕರ್‌ ಸ್ಪಷ್ಟಪಡಿಸಿದರು.

''ಕುತೂಹಲಕಾರಿ ಸಂಗತಿಯೆಂದರೆ ಅಗಸ್ಟಾವೆಸ್ಟ್‌ಲ್ಯಾಂಡ್‌ ಕಂಪನಿ ಹಾಗೂ ಅದರ ಅಂಗಸಂಸ್ಥೆಗಳನ್ನು 2014 ಜುಲೈ 3ರಂದು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಆದರೆ, ಆ ಕೆಲಸ ಮಾಡಿದ್ದ ಬಿಜೆಪಿ ಸರಕಾರ,'' ಎಂದು ಪರಿಕರ್‌ ಹೇಳಿದರು.

ಮೋದಿಗೆ ಪತ್ರ ಬರೆದಿದ್ದ ಮಿಚೆಲ್‌

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಡೀಲ್‌ನಲ್ಲಿ ಮಧ್ಯವರ್ತಿ ಕ್ರಿಸ್ಟಿನಾ ಮಿಚೆಲ್‌ ಈ ವ್ಯವಹಾರದಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂಬುದಾಗಿ ಪ್ರಧಾನಿ ಮೋದಿ ಅವರಿಗೆ ಕಳೆದ ನವೆಂಬರ್‌ನಲ್ಲಿ ಪತ್ರ ಬರೆದಿದ್ದ ಎನ್ನಲಾಗಿದೆ.

''ನನ್ನ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಸಲ್ಲಿಸಿರುವುದು ಹವಾಲಾ ಜಾಲ ನಡೆಸಿರುವ ತಂತ್ರ,'' ಎಂದು ಈ ಪತ್ರದಲ್ಲಿ ಅವರು ತಿಳಿಸಿದ್ದಾರೆ.

''ಭಾರತದ ಹವಾಲಾ ಜಾಲದಲ್ಲಿ ಈ ತಂತ್ರ ಹೊಸದೇನೂ ಅಲ್ಲ. ಯಾರಾರ‍ಯರ ಹೆಸರನ್ನೋ ಮಧ್ಯವರ್ತಿಗಳೆಂದು ಉಲ್ಲೇಖಿಸಿ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಆತನ ಪಾತ್ರ ಏನೂ ಇರುವುದಿಲ್ಲ,'' ಎಂದು ಈ ಪತ್ರದಲ್ಲಿ ಮಿಚೆಲ್‌ ಬರೆದಿದ್ದ.

ಈ ಡೀಲ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ಮಿಚೆಲ್‌ ಸದ್ಯ ಭಾರತದ ವಾಂಟೆಡ್‌ ಪಟ್ಟಿಯಲ್ಲಿದ್ದು, ಈತನ ಬಂಧನಕ್ಕಾಗಿ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ.

ಬ್ರಿಟನ್‌ ಮೂಲದವನಾದ ಮಿಚೆಲ್‌, 2010ರಲ್ಲಿ ನಡೆದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಡೀಲ್‌ನಲ್ಲಿ ಮಧ್ಯವರ್ತಿಯಾಗಿ ಕೋಟ್ಯಂತರ ರೂಪಾಯಿ ಕಿಕ್‌ ಬ್ಯಾಕ್‌ ಪಡೆದಿದ್ದ ಎಂಬ ಆರೋಪವಿದೆ.

]]>
Article at Vijaykarnataka.com:52014399Wed, 27 Apr 2016 22:30:00 GMT